ಅರ್ಕೋಣಂ : ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯ ವಾಲಾಜಪೇಟೆ
ತಾಲ್ಲೂಕಿನ ಒಂದು ವಾಣಿಜ್ಯ  ಕೇಂದ್ರ . ವಿಸ್ತೀರ್ಣ 6.48 ಚ.ಕಿಮೀ. ಜನಸಂಖ್ಯೆ  77300
(2001). ತಮಿಳುನಾಡಿನಲ್ಲಿ ಮುಖ್ಯ ಮಾರ್ಗಕೇಂದ್ರವಾಗಿದೆ. ದಕ್ಷಿಣ ರೈಲೆಯ ವಾಯವ್ಯ
ಮತ್ತು ನೈರುತ್ಯ ಶಾಖೆಗಳು ಅರ್ಕೋಣಂ ಜಂಕ್ಷನ್ನಿನಲ್ಲಿ ಸೇರುವುದರಿಂದ ತಮಿಳುನಾಡು
ಮತ್ತು ಮೈಸೂರುಗಳಿಗೆ ಸಂಪರ್ಕವನ್ನು ಕಲ್ಪಿಸಲಾಗಿದೆ.
(ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ